Thursday, January 21, 2010

ಕಥಾ-ಗೀತಾ

ಒಂದೂರಲ್ಲಿ ಒಬ್ಬ ವ್ಯಾಪಾರಿ ತನ್ನ ಪ್ರವಾಸ ಮುಗಿಸಿ ಬರುವಾಗ ಆತನ ಅಂಗಡಿ, ಮನೆಯೆಲ್ಲ ಸುಟ್ಟು ಕರಕಲಾಗಿರುವುದನ್ನು ಕಂಡು ದಿಗ್ಭ್ರಾಂತಗೊಳ್ಳುತ್ತಾನೆ. ಮರುಕ್ಷಣವೇ ಸಂಭಾಳಿಸಿಕೊಂಡು ಅದೇ ಸುಟ್ಟು ಹೋದ ಬೂದಿ ರಾಶಿಯ ಮೇಲೆ ತನ್ನ ಗಿರಾಕಿಗಳಿಗೆ ಸೂಚನಾ ಫಲಕವೊಂದನ್ನು ಬರೆಯುತ್ತಾನೆ. “SHOP BURNT, GOODS BURNT, HOUSE BURNT, BUT FAITH IS NOT BURNT, STARTING BUSINESS TOMMORROW” ಎಂದು. ನಮಗೆ ನಮ್ಮ ಮೇಲೆ ಆತ್ಮ ವಿಶ್ವಾಸ, ಛಲ ಮತ್ತು ನಂಬಿಕೆ ಇದ್ದಾಗ ಮಾತ್ರ ಹೀಗೆ ಮಾಡುವುದು ಸಾಧ್ಯ. ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ವಕ್ತಿತ್ವ ವಿಕಸನದ ಪಾಠ ಬೋಧಿಸುತ್ತಾ ಹೇಳುತ್ತಾನೆ…

ಉದ್ದರೇದಾತ್ಮನಾ ಆತ್ಮಾನಂ ನಾತ್ಮಾನಂ ಅವಸಾದಯೇತ್
ಆತ್ಮೈವಹ್ಯಾತ್ಮನೋ ಬಂಧುರಾತ್ಮೈವ ರಿಪುರಾತ್ಮನಃ (ಗೀತೆ: ಅ: 6.5)


“ನಮ್ಮನ್ನು ಉದ್ಧರಿಸಿಕೊಳ್ಳುವವರು ನಾವೇ. ನಮ್ಮ ಉದ್ಧಾರವಾಗಲೀ, ಅವನತಿಯಾಗಲೀ ಇರುವುದು ನಮ್ಮಲ್ಲೇ. ನಮ್ಮ ಒಳಿತಿಗೋ ಕೆಡುಕಿಗೋ ಕಾರಣರಾಗಿ ನಾವೇ ನಮ್ಮ ಮಿತ್ರರೂ, ಶತ್ರುಗಳೂ ಆಗುತ್ತೇವೆ.” ಸ್ವ-ನಿರ್ವಹಣೆ ಇದ್ದಲ್ಲಿ ಮಾತ್ರ ನಾವು ಜೀವನದಲ್ಲಿ ನಮ್ಮ ಮಿತ್ರರಾಗಲು ಸಾಧ್ಯ
-ರವಿಪ್ರಸಾದ್ ಶರ್ಮ

Taken from Sthanika Brahmins community newsletter Suptha Deepthi.
Site Link : http://sites.google.com/site/sthanikacomm/suptha-deepthi

No comments:

Post a Comment